ಅಭಿಪ್ರಾಯ / ಸಲಹೆಗಳು

ಕೊರವಂಜಿ

‘ಕೊರವಂಜಿ’ ಜನಾಂಗದವರು ಮೂಲತಃ ಅಲೆಮಾರಿಗಳು.ಇವರನ್ನು ಕೊರಮತಿಯರು. ಕೊರಮರು, ಕೊರಚರು (ಕೊರಸು) ಎಂದು ಕರೆಯುವುದು ಇದೆ. ಇವರ ಮುಖ್ಯ ಉದ್ಯೋಗ ಕಣಿ ಹೇಳುವುದಾಗಿದೆ. ಹಿಂದೆ ರಾಜಮಹಾರಾಜರೂ ಕೊರವಂಜಿಗಳ ಕಣಿಯಲ್ಲಿ ನಂಬಿಕೆಯಿಟ್ಟಿದ್ದರು. ಜನರಿಗೆ ಜ್ಯೋತಿಷಕಾರರ ಮಾತಿಗಿಂತ ಕೊರವಂಜಿಯ ಕಣಿಯಲ್ಲೇ ಹೆಚ್ಚು ನಂಬಿಕೆ.

 

ಶಕ್ತಿದೇವತೆ ಇವರ ಕುಲದೈವವೆಂದೂ ಕೃಷ್ಣನೇ ಇವರ ಮೂಲ ಪುರುಷನೆಂದೂ ಹೇಳುತ್ತಾರೆ. ಕೊರವಂಜಿಗಳು ಆಯಾ ಪ್ರದೇಶಗಳಿಗನುಗುಣವಾಗಿ ತಮ್ಮ ಕುಲದೇವತೆಯ ಹೆಸರನ್ನು ಹೇಳುತ್ತಿರುತ್ತಾರೆ.

 

ಕೊರವಂಜಿಯ ಉಡುಗೆ ತೊಡುಗೆಗಳಲ್ಲಿ ವೈಭವವಿಲ್ಲದಿದ್ದರೂ ತುಂಬಾ ಆಕರ್ಷಕವಾಗಿರುತ್ತದೆ. ಮೈತುಂಬಾ ಕಪ್ಪಿನ ಕಲೆಯ ಚುಕ್ಕೆಗಳಿಂದ (ಹಚ್ಚೆ) ಅಲಂಕಾರ, ಬಣ್ಣಬಣ್ಣದ ಸೀರೆ ಕುಬುಸ,ವಾಲಿಸಿ ಕಟ್ಟಿದ ತುರುಬು, ಕಾಲಕಡಗ, ಮೂಗಿಗೆ ಮುಕುರ,ತಲೆಗೆ ದುಪ್ಪಟಿ ಹಾಗೂ ಬುಟ್ಟಿ, ಆ ಬುಟ್ಟಿಯಲ್ಲಿ ಯಲ್ಲಮ್ಮ ದೇವಿಯದೆಂದು ಹೇಳುವ ಚೌಕಾಕಾರದ ಚಿಕ್ಕ ಪೆಟ್ಟಿಗೆ, ಕೈಯಲ್ಲಿ ಉದ್ದವಾದ ಕೋಲು, ಹಣೆಗೆ ಕುಂಕುಯಮ, ರಟ್ಟೆಗಳಿಗೆ ಬೆಳ್ಳಿ ವಂಕಿಗಳು ಇವು ಕಲಾವಿದರ ವೇಷಭೂಷಣಗಳು. ಹೀಗೆ ಅಲಂಕೃತಳಾದ ಕೊರವಂಜಿಯು ‘ಹೇಳುವೆ ಕಣಿ ಹೇಳುವೆ ಕಣಿ’ ಎಂದು ಹಾಡುತ್ತಾ ಬರುತ್ತಾಳೆ.

 

ಕೊರವಂಜಿಗಳ ಕಣಿ ಹೇಳುವುದರಲ್ಲಿ ಮತ್ತು ಹಚ್ಚೆ ಹೊಯ್ಯುವುದರಲ್ಲಿ ಪರಿಣಿತರು. ಸೂಜಿಯಂತಹ ಸಾಧನದಿಂದ ನಿರ್ದಿಷ್ಟವಾದ ಸೊಪ್ಪಿನ ರಸವನ್ನು ಹಚ್ಚೆ ಹೊಯ್ಯುವ ಜಾಗಕ್ಕೆ  ಹಚ್ಚಿ ಕಲಾತ್ಮಕವಾಗಿ ಚುಚ್ಚುತ್ತಾರೆ. ಚುಚ್ಚಿದಾಗ ನೋವಾಗದಿರಲೆಂದು  ಕೊರವಂಜಿಯರು ಹಾಡುತ್ತಾರೆ. ಹಚ್ಚೆಯಲ್ಲಿ ನಾನಾ ಬಗೆಯ ಚಿತ್ರಗಳನ್ನು ಬಿಡಿಸುತ್ತಾರೆ. ನೈಪುಣ್ಯವನ್ನು ತೋರಿಸುತ್ತಾರೆ. ಕೊರವಂಜಿಗಳು ಒಂದು ಕಾಲಕ್ಕೆ ‘ಕಣಿ’ ಹೇಳುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ಇದೀಗ ಬುಟ್ಟಿ, ತಟ್ಟೆ ಹೆಣೆಯುವ ಉಪವೃತ್ತಿಯಲ್ಲಿ ತೊಡಗಿದ್ದಾರೆ.  

ಇತ್ತೀಚಿನ ನವೀಕರಣ​ : 13-06-2023 03:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080