ಅಭಿಪ್ರಾಯ / ಸಲಹೆಗಳು

ಚೌಡಕಿ ವಾದ್ಯ

ಚೌಡಿಕೆ ಒಂದು ವಿಶೇಷ ಸ್ವರೂಪದ ವಾದ್ಯ. ಕೊಳಗದ ಆಕಾರದ ಕಂಚಿನ ಸಾಧನವೊಂದಕ್ಕೆ ಬಾತುಕೋಳಿಯ ಮೇತೆಯ (ಕುತ್ತಿಗೆ ಭಾಗದ) ಚರ್ಮವನ್ನು ಒಂದೆಡೆ ಅಂಟಿಸಲಾಗುವುದು. ತೆಂಗಿನ ಮರವನ್ನು ಕೊಳಗದಾಕಾರದಲ್ಲಿ ಕೊರೆದು ವಾದ್ಯಕ್ಕೆ ಬಳಸುವರು. ಬಾತುಕೋಳಿಯ ಚರ್ಮದ ನಡುವಿನಿಂದ ಕೊಳಗದ ಒಳಭಾಗಕ್ಕೆ ಸೇರಿದಂತೆ ಎರಡು ಮೊಳ ಉದ್ದದ ಕುರಿಯ ಕರುಳು ದಾರವನ್ನು ಕಟ್ಟಲಾಗುವುದು. ಬಿದಿರುಗಳುವೊಂದನ್ನು ಕೊಳಗದ ಮೇಲಿನಿಂದ ಎಳೆದು ಕಟ್ಟಿ ಒಂದು ತುದಿಗೆ ಈ ದಾರವನ್ನು ಎಳೆದು ಬಿಗಿಪಡಿಸಲಾಗುವುದು. ಮರದ ಬೆಣೆಯೊಂದನ್ನು ಬಳಸಿ ಹೀಗೆ ಬಿಗಿಪಡಿಸಿದ ದಾರವನ್ನು ಮೀಟಿದರೆ ವಿಶಿಷ್ಟವಾದ ನಾದ ಹೊಮ್ಮುತ್ತದೆ. ಇದನ್ನು ಶ್ರುತಿಗೂ ಕೈಯಲ್ಲೇ ದಾರವನ್ನು ಎಳೆದು ನುಡಿಸುವ ಚೌಡಿಕೆ ವಾದ್ಯವನ್ನು ಮುಮ್ಮೇಳಕ್ಕೂ ಬಳಸಲಾಗುವುದು. ಇದನ್ನು ನುಡಿಸುತ್ತ ಕಲಾವಿದರು ಮೇಳ ನಡೆಸಿಕೊಡುತ್ತಾರೆ.

 

ಚೌಡಿಕೆ ಮೇಳದಲ್ಲಿ ನೃತ್ಯಕ್ಕೆ ವಿಶೇಷ ಪ್ರಾಶಸ್ತ್ಯ ಉಂಟು. ಮುಖ್ಯ ನಿರೂಪಕ ಮಾತ್ರ ಕುಣಿತ ನಿರ್ವಹಿಸುವುದು ಇಲ್ಲಿಯ ವಿಶೇಷ. ಇಬ್ಬರು/ ಮೂವರು ಹಿಮ್ಮೇಳದಲ್ಲಿರುತ್ತಾರೆ. ಮುಖ್ಯ ನಿರೂಪಕ ಕರಿಯ ನಿಲುವಂಗಿ, ನಡುವಿಗೆ ಕೆಂಪು ವಸ್ತ್ರ, ಕಚ್ಚೆಯ ಪಂಚೆ, ತಲೆಗೆ ಕೆಂಪು ರುಮಾಲು ಸುತ್ತಿ, ಕೊರಳಿಗೆ ಹಳದಿ ಮಣಿ ಧರಿಸಿ ತಮಗಾಗಿ ಸಿದ್ಧವಾದ ಚಪ್ಪರವೊಂದರಲ್ಲಿ ಚೌಡಿಕೆಯನ್ನು ಹಿಡಿದು ಹಾಡುತ್ತಾನೆ. ಎರಡು ಕಾಲನ್ನು ಜೋಡಿಸಿ ಅತ್ತ – ಇತ್ತ ಹಿಂದೆ ಮುಂದೆ ಬಾಗಿ ಬಳುಕಿ  ವಯ್ಯಾರದ ನೃತ್ಯ ಮಾಡುತ್ತಾನೆ.

 

ಚೌಡಿಕೆಯವರು ಎಲ್ಲಮ್ಮನ ಮಹಿಮೆಯನ್ನು ಪ್ರಸಾರ ಮಾಡುವ ವಿಶಿಷ್ಟ ವರ್ಗದ ಕಲಾವಿದರಾಗಿ ಕಂಡು ಬಂದಿದ್ದಾರೆ. ಇವರು ಹಾಡುವ  ಹಾಡುಗಳನ್ನು ಧಾರ್ಮಿಕ ಹಾಗೂ ಲೌಕಿಕ ಎಂದು ವಿಂಗಡಿಸಿಕೊಳ್ಳಲಾಗಿದೆ. ರೇಣುಕೆಯ ಕತೆ ಮತ್ತು ಸರ್ಜಪ್ಪನಾಯಕನ ಕಥೆ – ಇವು ಎರಡು ಮಹತ್ವದ ಕಥೆಗಳು. ಪುರಾಣ ಮೂಲಕ್ಕಿಂತ ಭಿನ್ನವಾಗಿ ಇವರ ಕಥೆ ಹೊಸ ಸೃಷ್ಟಿಯನ್ನು ಪಡೆದುಕೊಂಡಂತೆ ಕಾಣುವುದಾದರೂ ಪುರಾಣ ಹಾಗೂ ಜಾನಪದ ಅಂಶಗಳ ಸಮಬೆರಕ ಒಂದರ ನೆಲಗಟ್ಟಿನ ಮೇಲೆ ಮತ್ತೊಂದು ರೂಪುಗೊಂಡಿರುವುದನ್ನು ಕಾಣುತ್ತೇವೆ. ಚೌಡಿಕೆಯವರ ರೇಣುಕೆ ಮುಗ್ಧೆ; ಪರಿಶುದ್ಧೆ, ಪರಮೇಶ್ವರನ ಮಗಳಾದರೂ ವಿಧಿಯ ಕೈವಾಡದಿಂದ ಅನಂತ ಕಷ್ಟಕ್ಕೆ ಗುರಿಯಾದವಳು. ಮಗನ ಕೈಯಿಂದಲೇ ತನ್ನ ತಲೆಯನ್ನು ಕಡಿಸಿಕೊಂಡವಳು. ಸತ್ಯವನ್ನೇ ನೆಚ್ಚಿಕೊಂಡು ಅದೊಂದರ ಬಲದಿಂದಲೇ ಬೆಳೆದ ಅವಳು ಕೊನೆಗೆ ಅದರಿಂದಲೇ ಮತ್ತೆ ಮತ್ತೆ ಬದುಕಿ ಸತ್ಯಕ್ಕೆ ಸಾವಿಲ್ಲ ಎಂಬುದನ್ನು ದೃಢಪಡಿಸುತ್ತಾಳೆ. ದೇವಿಯಾಗಿ, ತಾಯಿಯಾಗಿ, ಎಲ್ಲಮ್ಮನಾಗಿ ಎಲ್ಲರಿಂದ ಪೂಜಾರ್ಹಳಾಗಿ ಚಿತ್ರಿತಳಾಗಿದ್ದಾಳೆ.

ಚೌಡಿಕೆವಾದ್ಯಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಲಿಂಕ್‌

ಇತ್ತೀಚಿನ ನವೀಕರಣ​ : 11-08-2023 12:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080