ಅಭಿಪ್ರಾಯ / ಸಲಹೆಗಳು

ಬಿಜಲಿವರಸೆ

ಇದೀಗ ವಿರಳವಾಗಿರುವ ಈ ಕಲೆಯನ್ನು ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕಾಣಬಹುದು. ಬಿಜಲಿವರಸೆ ಒಂದು ರೀತಿಯ ಯುದ್ಧ ಕಲೆಯೇ ಆಗಿದೆ.

ಬಿಜಲಿಯು ಒಂದು ಲೋಹದ ಪಟ್ಟಿ, ಇದು ಒಂದು ಇಂಚು ಅಗಲ ಹಾಗೂ ಐದರಿಂದ ಆರು ಅಡಿ ಉದ್ದವಿರುತ್ತದೆ. ಇಂತಹ ಹತ್ತು ಅಥವಾ ಹನ್ನೆರಡು ಬಿಜಲಿಯನ್ನು ಸೇರಿಸಿ ಅದಕ್ಕೆ ಭದ್ರವಾದ ಹಿಡಿಯನ್ನು ಮಾಡಿರುತ್ತಾರೆ.

ಸಾಮಾನ್ಯವಾಗಿ ಮೈತುಂಬ ಉಡುಗೆಯನ್ನು ತೊಟ್ಟುಕೊಳ್ಳುವುದು ವಾಡಿಕೆ. ಈ ಬಿಜಲಿಯನ್ನು ಬಲಗೈಯಲ್ಲಿ, ಒಮ್ಮೊಮ್ಮೆ ಎರಡೂ ಕೈಗಳಲ್ಲಿ ಹಿಡಿದುಕೊಂಡು ಬಲಕ್ಕೆ ಎಡಕ್ಕೆ ಮುಂದೆ, ಬೆನ್ನ ಹಿಂದೆ ಹೀಗೆ ವಿವಿಧ ಭಂಗಿಗಳಲ್ಲಿ ಬಾಗಿ – ಬಳುಕಿ ತಿರುಗಿಸಲಾಗುತ್ತದೆ. ರಾತ್ರಿಯ ವೇಳೆಯಲ್ಲಾದರೆ ನೆಲಕ್ಕೆ ತಾಗುವ ಬಿಜಲಿಯ ರಭಸಕ್ಕೆ ಉಂಟಾಗುವ ಬೆಂಕಿ ಕಿಡಿಗಳು ಕಾಣುತ್ತವೆ.

ಪ್ರಾರಂಭದಲ್ಲಿ ಭೂಮಿಗೆ ಶರಣು ಮಾಡಲಾಗುತ್ತದೆ. ಹಾಗೆಯೇ ಮುಗಿಸುವಾಗಲೂ ಶರಣು ಮಾಡಿಕೊಳ್ಳುವುದುಂಟು. ಈ ಕಲೆಯೊಂದಿಗೆ ಯಾವುದೇ ವಾದ್ಯವನ್ನು ಬಳಸುವುದಿಲ್ಲ.

ಇತ್ತೀಚಿನ ನವೀಕರಣ​ : 13-06-2023 03:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080