ಅಭಿಪ್ರಾಯ / ಸಲಹೆಗಳು

ತಮಟೆ ವಾದನ

ಕೊಡಗು ಮತ್ತು ದಕ್ಷಿಣ ಕನ್ನಡವನ್ನುಳಿದು ಕರ್ನಾಟಕದಾದ್ಯಂತ ತಮಟೆ ಪ್ರಸಿದ್ಧವಾಗಿದೆ. ಹಲಗೆ, ತಪ್ಪಡೆ, ಪಟದ ಹರೆ ಎಂದು ಕರ್ನಾಟಕದಲ್ಲಿ ಕರೆಯಲಾಗುವುದನ್ನು “ಪಲಕ” ಎಂದು ತೆಲುಗಿನಲ್ಲಿ ಕರೆಯುತ್ತಾರೆ.

 

ತಮಟೆ ಬಹಳ ಪ್ರಾಚೀನವಾದ ಇತಿಹಾಸವಿದೆ. ಅದರ ಪ್ರಾಚೀನತೆಯು ವಡ್ಡಾರಾಧನೆಯ ಕಾಲಕ್ಕೆ ಹೋಗುತ್ತದೆ. (ಕ್ರಿ.ಶ. 9 ನೇ ಶತಮಾನ) “ಪರ” ಎಂದು “ವಡ್ಡಾರಾಧನೆ” ಯಲ್ಲಿಯೂ ಅಲ್ಲಮನ ವಚನ ಚಂದ್ರಿಕೆ, ಬಸವಣ್ಣನ ವಚನಗಳು, ಜೀವಂಧರ ಚರಿತೆಗಳಲ್ಲಿ ಹರೆ (ಪರೆ) ಎಂಬುದಾಗಿಯೂ “ಸನತ್ಕುಮಾರ ಚರಿತ್ರೆ” ಸೊಬಗಿನ ಸೋನೆ, ರಾಘವಾಂಕ ಚರಿತೆ, ಚೆನ್ನಬಸವ ಪುರಾಣ, ಭರತೇಶ ವೈಭವ, ಸಿದ್ಧರಾಮ ಚರಿತೆಗಳಲ್ಲಿ ತಪ್ಪಟೆ, ತಂಬಟೆ, ತಂಬರ ಇತ್ಯಾದಿ ಹೆಸರುಗಳಿಂದಲೂ ಉಲ್ಲೇಖಿತವಾಗಿದೆ.

 

ತಮಟೆಯು ಹಳ್ಳಿಯ ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಾತ್ರೆ, ಉತ್ಸವ, ಕುಣಿತ, ಹಬ್ಬ, ಬಯಲಾಟ, ಮರಣ, ಮದುವೆ, ಮೆರವಣಿಗೆಗಳಿಗೆ ಹಲಗೆ ಅವಶ್ಯಕ.

 

ತಮಟೆಯ ತಯಾರಿ ಸರಳವಾದುದು. ಒಂದು ವೃತ್ತಾಕಾರವಾದ ಮರದ ಇಲ್ಲವೇ ಕಬ್ಬಿಣದ ಬಳೆಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಬಳೆಗೆ ನಾಲ್ಕು ಚಕ್ಕೆಗಳನ್ನು ಮಾಡಿ ಮೊಳೆ ಹೊಡೆದು ಬಿಗಿಗೊಳಿಸಲಾಗುತ್ತದೆ. ಮರದ ಬಳೆಗಾದರೆ, ಹೂನರು ಮರ, ಸಿಗರೇವು ಮರ, ಹಲಸಿನ ಮರವನ್ನು ಹಾಕಿದರೆ ಉತ್ತಮ ತಮಟೆಯಾಗುತ್ತದೆ. ಕಬ್ಬಿಣದ ಬಳೆಗಾದರೆ ಬಂಡಿಯ ಚಕ್ರದ ಪಟ್ಟಾವನ್ನು ಉಪಯೋಗಿಸುತ್ತಾರೆ. ಈ ಬಳೆಯ ವ್ಯಾಸ ಸುಮಾರು ಅರ್ಧ ಅಂಗುಲದಿಂದ ಒಂದೂವರೆ ಅಡಿಯಾಗಿರುತ್ತದೆ. ಮೇಕೆ  ಚರ್ಮ ಇದರ ಮುಚ್ಚಳಿಕೆಯಾಗಿರುತ್ತದೆ. ಹುಣಸೆ ಬೀಜದ ಅಂಟು, ಮೇಕೆ ಇಲ್ಲದೇ ದನದ ಚರ್ಮದ ದಾರದಿಂದಲೇ ಈ ಚರ್ಮವನ್ನು ಬಳೆಗೆ ಬಿಗಿಯಲಾಗುತ್ತದೆ. ಪ್ರಾದೇಶಿಕವಾಗಿ ಹಲಗೆಯ ಆಕಾರ ವ್ಯತ್ಯಾಸವಾಗುತ್ತದೆ. ಹೀಗಾಗಿ ಒಂದೂವರೆ ಅಡಿಯಿಂದ ಎಂಟು ಅಡಿ ವ್ಯಾಸದ ಹಲಗೆಗಳಿವೆ.

 

ಹಲಗೆಯನ್ನು ನುಡಿಸುವುದಕ್ಕೆ ಮೊದಲು ಬೆಂಕಿಯಲ್ಲಿ ಕಾಯಿಸಿದರೆ ನಾದ ಹಿತವಾಗಿರುತ್ತದೆ. ಹಲಗೆಯ ಕಂಠಕ್ಕೆ ತೊಗಲಿನ  ಬಾರು ಇರುತ್ತದೆ. ಇದನ್ನು ಹೆಗಲಿಗೆ ಏರಿಸಿ ಎದೆಗೆ ಎಡಭಾಗಕ್ಕೆ ಎತ್ತರಿಸಿ ನುಡಿಸುತ್ತಾರೆ. ಎಡಗೈ ಕಂಠದ ಮೇಲ್ಗಡೆಯಲ್ಲಿರುತ್ತದೆ. ಈ ಕೈಗೆ ಒಂದೂವರೆ ಅಡಿ ಉದ್ದ ಬೆತ್ತದ ಇಲ್ಲವೆ ಬಿದಿರಿನ “ಛಡಿ” ಇರುತ್ತದೆ. ಎಡಗೈ ಹಲಗೆಯ ಕಂಠದ ಭಾಗದಲ್ಲಿ ಮಾತ್ರ ನುಡಿಸುತ್ತಿದ್ದರೆ ಬಲಗೈ ಗುಣಿಕೆ ಹಲಗೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ವಿವಿಧ ಗತಿಯ ನಾದವನ್ನು ಹೊರಡಿಸುತ್ತದೆ.

 

ಬಹಳ ಮುಖ್ಯವಾದ ವಿಚಾರವೆಂದರೆ ದೇವರ ಉತ್ಸವ, ಧಾರ್ಮಿಕ ಕಾರ್ಯ, ತೇರು, ಜಾತ್ರೆ ಹಾಗೂ ಹಲವು ಕಲೆಗಳಿಗೆ ಪೂರಕವಾಗಿ ತಮಟೆ ಇಲ್ಲದಿದ್ದರೆ ಏನೂ ನಡೆಯುವಂತಿಲ್ಲ.

 

 

 

 

 

 

 

 

 

ಇತ್ತೀಚಿನ ನವೀಕರಣ​ : 13-06-2023 01:26 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080