ಅಭಿಪ್ರಾಯ / ಸಲಹೆಗಳು

ನಗಾರಿ

ನಗಾರಿ ವಾದ್ಯವು ಕೂಡ ಚರಿತ್ರೆಯ ಕಾಲಘಟ್ಟದ ರಣವಾದ್ಯವೇ.ಶತ್ರುಗಳ ದಾಳಿಯ ಬಗ್ಗೆ ಮುನ್ಸೂಚನೆ ನೀಡಲು ಕೊಂಬುಕಹಳೆಗಳನ್ನು ಬಳಸುತ್ತಿದ್ದಂತೆಯೇ ನಗಾರಿಗಳನ್ನು ಸಹ ಅದೇ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು.ಹಾಗೆಯೇ ಯುದ್ಧದ ಸಂದರ್ಭದಲ್ಲೂ ಸೈನಿಕರನ್ನು ಹುರಿದುಂಬಿಸುವ ಸಲುವಾಗಿ ನಗಾರಿಗಳನ್ನು ಬಾರಿಸುತ್ತಿದ್ದರು. ಆದರೆ ಈಗವು ಚರಿತ್ರೆಯ ಪಳಯುಳಿಕೆಗಳಾಗಿ ಜಾನಪದ ವಾದ್ಯ ಪರಿಕರಗಳ ಸ್ಥಾನದಲ್ಲಿ ನಿಂತಿವೆ.ವೇಗವಾಗಿ ಬದಲಾಗುತ್ತಿರುವ ಇಂದು ನಗಾರಿ, ಕೊಂಬು ಕಹಳೆಗಳೆಲ್ಲ ಬಳಸಬಲ್ಲ ಕಲಾವಿದರೇ ಇರದೆ ಕೇವಲ ಮ್ಯೂಜಿಯಂಗಳ ಅಲಂಕಾರದ ವಸ್ತುಗಳಾಗಿ ಉಳಿದರೂ ಹೆಚ್ಚಲ್ಲ.

 

ಜಗ್ಗಲಿಗೆ ಚರ್ಮವಾದ್ಯಗಳಲ್ಲೇ ಅತ್ಯಂತ ಬೃಹತ್ತಾದುದಾದರೂ ನಗಾರಿಯನ್ನೇ ಚರ್ಮವಾದ್ಯಗಳ ರಾಜನೆಂದು ಗುರುತಿಸುವುದು. ಅರ್ಧ ಗೋಲಾಕಾರದ ಕಬ್ಬಿಣದ ಕಡಾಯಿಗೆ ಹದ ಮಾಡಿದ ಎಮ್ಮೆಯ ಚರ್ಮವನ್ನು ಬಿಗಿದು ಕಟ್ಟಿ ನಗಾರಿಗಳನ್ನು ಸಿದ್ದಪಡಿಸಲಾಗುತ್ತದೆ.ನಗಾರಿ ಬಾರಿಸುವ ಕೋಲುಗಳು ಸಾಕಷ್ಟು ಗಟ್ಟಿಯಾಗಿರುತ್ತವೆ. ಏಟು ಬಿದ್ದಾಗ ಮುಚ್ಚಿದ ಕಡಾಯಿಯ ಒಳಭಾಗ ವಿಶಾಲವಾಗಿರುವುದರಿಂದ ಗಡಸಾದ ಮರುದನಿಯ ನಾದ ಹೊಮ್ಮುತ್ತದೆ.ನಗಾರಿ ಬಾರಿಸುವ ಕೋಲುಗಳು ತುದಿಯಲ್ಲಿ ದುಂಡಗಿರಬಹುದು ಮತ್ತು ಕೆಲವೊಮ್ಮೆ ತುದಿಯಲ್ಲಿ ಬಿಲ್ಲಿನಂತೆ ಬಾಗಿರಲೂಬಹುದು.ನಗಾರಿಗಳಲ್ಲಿ ವಿವಿಧ ಗಾತ್ರದವೂ ಉಂಟು.ಮಧ್ಯಮಗಾತ್ರದ ನಗಾರಿಗಳನ್ನು ಹಿಂದೆ ಕುದುರೆಯ ಬೆನ್ನಿಗೆ ಬಿಗಿದು ದೇವರು, ಧಾರ್ಮಿಕ ಗುರುಗಳು ಬರುತ್ತಿರುವುದನ್ನು ಸೂಚಿಸಲು ಬಡಿಯುತ್ತಿದ್ದರು. ಜಾನಪದ ಬದುಕಲ್ಲಿ ಒಂದೊಂದು ವಾದ್ಯವೂ ಹೀಗೆ ಅದಕ್ಕೇ ನಿರ್ದಿಷ್ಟ ಪಡಿಸಿದ ಸಂದರ್ಭಗಳ ಹೊಣೆಗಾರಿಕೆಯನ್ನು ನಿರ್ವಹಿಸುವುದೇ ಒಂದು ಜೀವನ ಪದ್ಧತಿಯಾಗಿದೆ.ನಗಾರಿಯನ್ನು ಸಹ ಹಲಗೆಯಂತೆಯೇ ಬೆಂಕಿಯ ಶಾಖದಲ್ಲಿ ಹದವಾಗಿ ಹುರಿಗೊಳಿಸುತ್ತಾರೆ.ನಗಾರಿಯನ್ನು ಸಾಧಾರಣವಾಗಿ ಕಾಲುಗಳ ಬಳಿ ಇಟ್ಟುಕೊಂಡೇ ಬಡಿಯ ಬೇಕು.ಇಲ್ಲವೇ ಎತ್ತರದಲ್ಲಿ ಇರಿಸಿ ಬಡಿಯಬೇಕಾಗುತ್ತದೆ.ಆದರೆ ಮಠಗಳ ನಗಾರಿ ಬಸವ ಅಂದರೆ ಎತ್ತು ಜೋಡಿ ನಗಾರಿಗಳನ್ನು ತಾನೇ ಬೆನ್ನಿನ ಎರಡು ಬದಿಗೆ ಹೊತ್ತು ಸಾಗುವಾಗ ಕಲಾವಿದರು ಆ ಎರಡೂ ನಗಾರಿಗಳನ್ನು ಲಯಬದ್ಧವಾಗಿ ಬಡಿಯುತ್ತಾರೆ.ಹಿಂದಿನ ಕಾಲದ ನಗಾರಿಯ ಘನತೆ, ಗೌರವಗಳ ಸಂಕೇತ ವಾದ್ಯವೆಂಬ ಕಲ್ಪನೆ ಈ ಆಧುನಿಕ ಕಾಲದಲ್ಲೂ ಅಪರೂಪಕ್ಕಾದರೂ ಮುಂದುವರೆದಿದೆ.

 

ಹಳೆಯ ಮೈಸೂರು ಪ್ರಾಂತ್ಯದಲ್ಲೆಲ್ಲಾ ನಗಾರಿ ಬಾರಿಸಬಲ್ಲ ನುರಿತ ಕಲಾವಿದರಿದ್ದಾರೆ. 

ಇತ್ತೀಚಿನ ನವೀಕರಣ​ : 13-06-2023 02:47 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080