ಅಭಿಪ್ರಾಯ / ಸಲಹೆಗಳು

ಕೀಲುಕುದುರೆ ಕುಣಿತ

ಇದು ಕರ್ನಾಟಕದ ಬಿಜಾಪುರ, ಬಳ್ಳಾರಿ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ, ಕೊಡಗು ಮತ್ತು ಇನ್ನು ಹಲವಾರು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಒಂದು ಜನಪ್ರಿಯ ಕುಣಿತ. ಕೊಡಗಿನಲ್ಲಿ ಇದನ್ನು “ ಪೊಯ್ ಕುದುರೆ” ಎನ್ನವರು. ಈ ಕಲೆ ಯಾವುದೇ ಜಾತಿಯೊಂದಕ್ಕೆ ಬದ್ಧವಾದ ಕುಣಿತವಲ್ಲ. “ಕುದುರೆಕೋಲ” ಹಾಗೂ ಮರಗಾಲು ಕುಣಿತಗಳು ಇದಕ್ಕೆ ಸಂವಾದಿಯಾದ ಕಲೆಗಳಾಗಿವೆ.

 

ಕೀಲು ಕುದುರೆಯನ್ನು ಮುಖ್ಯವಾಗಿ ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ. ಕಾಲುಗಳನ್ನು ಮಾತ್ರ ಬಿಟ್ಟು ಉಳಿದ ಹೊಟ್ಟೆ, ಎದೆ ಮತ್ತು ಹಿಂಭಾಗವನ್ನು ಕುದುರೆಯ ಆಕಾರದಂತೆ ಬಿದಿರಿನತೆಳುವಾದ ದಬ್ಬೆಗಳಿಂದ ಹೆಣೆಯಲಾಗುತ್ತದೆ.

 

ಕುದುರೆಯ ತಲೆಯನ್ನು ಕಾಗದದ ಹಿಟ್ಟಿನಿಂದ ರಚಿಸಿರುತ್ತಾರೆ. ಇದೆ ಒಳಭಾಗ ಜೊಳ್ಳಾಗಿರುತ್ತದೆ. ಕುಣಿಯುವಾಗ ಅದರ ನಾಲಿಗೆಯು ಮೇಲೆ ಕೆಳಗೆ ಚಲಿಸುವಂತೆ ಕೀಲನ್ನು ಅಳವಡಿಸಿರುತ್ತಾರೆ. ಕೀಲು ಕುದುರೆ ಹೆಸರೇ ಹೇಳುವಂತೆ ಕೀಲುಗಳಿಂದ ರಚಿತವಾದುದು. ರಾಜ ರಾಣಿಯರ ವೇಷಭೂಷಣವನ್ನು ಧರಿಸಿದ ಕಲಾವಿದರು ಈ ಕುದುರೆಯ ಬೆನ್ನಿನಲ್ಲಿ ಸೇರಿ ಹೆಗಲುಗಳಿಗೆ ಕುದುರೆಯ ದಬ್ಬೆಯ ದೇಹವನ್ನು ಬಿಗಿದುಕೊಳ್ಳುವರು. ಕೈಯಲ್ಲಿ ಲಗಾಮು ಹಿಡಿದು ಕೊಂಡು ಅದರ ತಲೆ ಬಾಲಗಳನ್ನು ಆಡಿಸುತ್ತ ಹಿಂದುಮುಂದು ಮಾಡಿ ಕುಣಿದಾಗ ಅದು ಕುದುರೆಯ ಭಂಗಿಯಂತೆ ಕಾಣುತ್ತದೆ.

 

ಸಾಮಾನ್ಯವಾಗಿ ಕೀಲು ಕುದುರೆ ಕಲಾವಿದರು ರಾಜ ರಾಣಿಯರಂತೆ ಕಿರೀಟ, ಭುಜಕೀರ್ತಿ, ಎದೆಹಾರ, ನಡುಬಿಲ್ಲೆ, ವೀರಗಾಸೆ ಇತ್ಯಾದಿ ರಾಜಯೋಗ್ಯವಾದ ವೇಷಭೂಷಣ ತೊಟ್ಟಿರುತ್ತಾರೆ. ಮುಖಕ್ಕೆ ಬಣ್ಣ ಕಾಲಿಗೆ ಗೆಜ್ಜೆಗಳಿರುತ್ತವೆ. ಹೆಣ್ಣು ಮತ್ತು ಗಂಡುವೇಷಗಳು ಜೊತೆ ಜೊತೆಯಲ್ಲಿ ಕುಣಿಯುವುದು ರೂಢಿ.

 

 

 

 

ಇತ್ತೀಚಿನ ನವೀಕರಣ​ : 13-06-2023 03:04 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080