ಅಭಿಪ್ರಾಯ / ಸಲಹೆಗಳು

ಕರಡಿ ಮಜಲು

ಕರಡಿ ಮಜಲು ಅಥವ ಕರಡಿ ಮೇಳ ಎಂದೂ ಕರೆಯಲ್ಪಡುವ ಕರಡೆ ನಾದಸ್ವರ ಮೇಳದಲ್ಲಿನ ಡೋಲಿನಂತಹ ಸಣ್ಣ ಚರ್ಮವಾದ್ಯ. ಪದಕೋಶಗಳಲ್ಲಿ ಕರಡೆ/ಕರಡಿ ಎಂಬುದಕ್ಕೆ ವಾದ್ಯವಿಶೇಷ ಎಂಬ ಸಾಮಾನ್ಯ ಅಥðವಿದೆ. ಆದರೆ ತಮಿಳಿನಲ್ಲಿ ಕರಟಿ, ಕರಟಿಪ್ಪಕೈ ಎಂಬ ಪದಗಳಿಗೆ ಕರಡಿಯಂತೆ ನಾದ ಮಾಡುವ ವಾದನ ಎಂಬಥðವಿದೆ. ತುಳುವಿನಲ್ಲಿ ‘ಕರಂಡೆ’ ಅಂದರೆ ದಾಡಿ ವಾದ್ಯ ನುಡಿತದ ಒಂದು ತಾಳಗತಿ ಎಂಬಥðವಿದೆ. ಹರಿಹರ ಕವಿ ‘ಪದ ಶಂಖದವರ ಕಹಳೆಗಳ ರವದಿ ಡಿಂಡಿಮರವರಗಳಾನುಕದ ದವರ ಕರಡೆಗಳವರ ನಿಸ್ಸಾಳರವಂ’ ಎಂದು ಉಲ್ಲೇಖಿಸಿದ್ದಾನೆ. ಮಧುಕೇಶ್ವರನ ಪೂಜೆಯಲ್ಲಿ ಕರಡೆಗಳ ವಾದನವಿತ್ತೆಂದು ಚಾಮರಸ (ಪ್ರ.ಲೀ.ಪು.4-41), ಮೆರವಣಿಗೆಯ ಮುಂದೆ ಕರಡೆಯಿರುತ್ತಿತ್ತೆಂದು ಪದ್ಮರಾಜ ಪುರಾಣ (3- 53)ವೂ ಉಲ್ಲೇಖಿಸಿವೆ. ರನ್ನನೂ ತನ್ನ ಗದಾಯುದ್ಧದಲ್ಲಿ ಕರಡೆ ವಾದ್ಯದ ಪ್ರಸ್ತಾಪ ಮಾಡಿರುವುದರಿಂದ 900 ವಷðಗಳ ಆಚೆಯೂ ಈ ವಾದ್ಯದ ಬಳಕೆ ಇತ್ತೆಂಬುದು ಸ್ಪಷ್ಟ. ನಂದಿದ್ವಜ ಕುಣಿತಕ್ಕಂತೂ ಕರಡೆ ಅತ್ಯಗತ್ಯ. 

  

ಸೀಹೊನ್ನೆಯಂತಹ ಮರದ ಪಡಗ ತಯಾರಿಸಿ ಆಡಿನ ಚಮðವನ್ನು ಎರಡು ಬದಿಗೂ ಹೊಂದಿಸಿ ಕರಡೆ ವಾದ್ಯ ತಯಾರಿಸಲಾಗುತ್ತದೆ. ಕರಡೆ ನುಡಿಸುವ ಎಡಗೈನ ಕೋಲು ಒಂದು ಗೇಣು ಉದ್ದ ಹಾಗೂ ಕಿರುಬೆರಳಿನ ಗಾತ್ರದಲ್ಲಿರುತ್ತದೆ. ಬಲಗೈನ ಕೋಲು ಕಿರುಬೆರಳಿನ ಗಾತ್ರಕ್ಕಿಂತ ಕೊಂಚ ದಪ್ಪದಾಗಿರುತ್ತದೆ. ಕರಡೆ ವಾದನದೊಂದಿಗೆ ತಾಳ, ದಿಮ್ಮು, ಚೌಗಡ, ಶಹನಾಯಿ, ಶೃತಿ ಮೊದಲಾದ ವಾದ್ಯ ಪರಿಕರಗಳನ್ನೂ ನುಡಿಸಲಾಗುತ್ತದೆ. ಹಬ್ಬ, ಜಾತ್ರೆಯಿಂದ ಮೊದಲ್ಗೊಂಡು ಕೌಟುಂಬಿಕವಾದ ಮಂಗಳ ಕಾರ್ಯಗಳೆಲ್ಲದರಲ್ಲೂ ಕರಡೆ ಮಜಲು ಬಳಸಲಾಗುತ್ತದೆ. ವೀರಗಾಸೆ ಮತ್ತು ಪುರವಂತಿಕೆಯ ಮೇಳದಲ್ಲೂ ಕೆಲವೊಮ್ಮೆ ರೌದ್ರವತೆಯ ವಾತಾವರಣ ನಿರ್ಮಾಣಕ್ಕಾಗಿಯೂ ಕರಡೆ ವಾದ್ಯ ಬಳಸಲಾಗುತ್ತದೆ. ರಾಯಚೂರು, ಬಳ್ಳಾರಿ, ಧಾರವಾಡ, ಬಿಜಾಪುರ, ಬೆಳಗಾಂ, ಶಿವಮೊಗ್ಗ, ಗುಲ್ಬಗಾð, ಬೀದರ್, ಚಿತ್ರದುಗð, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕರಡೆ ವಾದ್ಯದ ವ್ಯಾಪಕ ಬಳಕೆ ಇದೆ. ಈ ವಾದ್ಯ ಯಾವುದೇ ನಿದಿðಷ್ಟ ಜಾತಿಯೊಂದಕ್ಕೆ ಸೀಮಿತವಾಗಿಲ್ಲ.

  

 ಸಾಮಾನ್ಯವಾಗಿ ಒಂಬತ್ತು ಮಂದಿ ಕಲಾವಿದರು ಕರಡೆ ಮೇಳದಲ್ಲಿರುತ್ತಾರೆ. ಎಲ್ಲರೂ ತಲೆಗೆ ರೇಷ್ಮೆ ಪಟ್ಟಿ, ತಿಳಿನೀಲಿ ಹಸಿರು ಮಿಶ್ರಿತ ಅಂಗಿ, ಸೊಂಟಕ್ಕೆ ಕೆಂಪು ವಸ್ತ್ರ, ಹಸಿರು ದಡಿಯ ದೋತರ ಧರಿಸಿರುತ್ತಾರೆ. ಎದುರುಬದುರು ಹೆಜ್ಜೆಗಾರಿಕೆಯನ್ನು ಜಾತ್ರೆ, ಉತ್ಸವ, ಮದುವೆಗಳಲ್ಲೂ, ವೃತ್ತಾಕಾರದ ಹೆಜ್ಜೆಗಾರಿಕೆಯನ್ನು ವೀರಗಾಸೆಯಲ್ಲೂ, ಅಧð ಚಂದ್ರಾಕಾರದ ಶೈಲಿಯನ್ನು ವೇದಿಕೆಯ ಪ್ರದರ್ಶನದಲ್ಲೂ ಅನುಸರಿಸುತ್ತಾರೆ. ಕರಡೆ ಮೇಳವು ಜಾನಪದ ಮತ್ತು ಶಾಸ್ತ್ರೀಯ ಕಲೆಗಳ ನಡುವಿನ ಕೊಂಡಿಯಂತಿದೆ. ಕರಡೆ ಮಜಲಿನಲ್ಲಿ ಡೊಳ್ಳು ಕೂಡ ಇರುವುದುಂಟು. ಆದಿತಾಳ, ಏಕತಾಳ, ಜಂಪೆತಾಳ, ಚೌತಾಳ, ಧೃವ ತಾಳ, ಸಂಕೀರ್ಣ ತಾಳ ಮುಂತಾದ ಬಡಿತದ ಬಗೆಗಳಿವೆ. ಇತ್ತೀಚೆಗೆ ಹಿಂದೂಸ್ತಾನಿ ಸಂಗೀತದ ಪ್ರಭಾವವೂ ಕಂಡುಬರುತ್ತದೆ. ಹಿಂದೆ ಕರಡೆ ಮೇಳವನ್ನು ಸೈನಿಕರನ್ನು ಹುರಿದುಂಬಿಸಲು ಕೂಡ ಬಳಸುತ್ತಿದ್ದರಂತೆ, ದಕ್ಷಿಣ ಕರ್ನಾಟಕದ ‘ಚಿಟ್ ಮೇಳ’ ಕರಡೆ ಮಜಲಿಗೆ ಸಂವಾದಿಯಾದ ಇನ್ನೊಂದು ಕಲೆ. ಹಲಾಲ ಆದ ಚರ್ಮದಿಂದಲೇ ಕರಡೆ ತಯಾರಿಸಬೇಕು ಎಂಬ ವಿಧಿಯೂ ಇದೆ.

 

ಇತ್ತೀಚಿನ ನವೀಕರಣ​ : 13-06-2023 02:56 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080