ಅಭಿಪ್ರಾಯ / ಸಲಹೆಗಳು

ಜಡಡ ಕೋಲಾಟ

ಕರ್ನಾಟಕದಾದ್ಯಂತ ಜನಪ್ರಿಯವಾಗಿರುವ ಕೋಲಾಟದಲ್ಲಿನ ಒಂದು ವಿಶಿಷ್ಟ ಪ್ರಕಾರ ಜಡೆ ಕೋಲಾಟ. ಎಂಟು, ಹನ್ನೆರಡು ಅಥವ ಹದಿನಾರರ ಸಮಸಂಖ್ಯೆಯಲ್ಲಿ ಕಲಾವಿದರಿರುತ್ತಾರೆ. ನಿರ್ದಿಷ್ಟ ಅಂತರದಲ್ಲಿ ನೆಟ್ಟ ಎರಡು ಕಂಬಗಳಿಗೆ ಮೇಲ್ತುದಿಯಲ್ಲಿ ಅಡ್ಡಲಾಗಿ ಬಿದಿರಿನ ಗಳ ಕಟ್ಟಿ, ಅದರ ಮಧ್ಯಭಾಗದಲ್ಲಿ ಹಗ್ಗಗಳನ್ನು ಕಟ್ಟಲು ಅನುಕೂಲವಾಗುವಂತೆ ವೃತ್ತಾಕಾರದ ಸಾಧನವೊಂದನ್ನು ಬಿಗಿದಿರುತ್ತಾರೆ. ನೆಲದಿಂದ 10-12 ಅಡಿ ಎತ್ತರದಿಂದ ಇಳಿಬಿದ್ದ ಹಗ್ಗಗಳನ್ನು ಕಲಾವಿದರು ಸೊಂಟಕ್ಕೆ ಕಟ್ಟಿಕೊಂಡಿರುತ್ತಾರೆ. ಕೆಲವೊಮ್ಮೆ ಕೈಯಲ್ಲೇ ಹಿಡಿದುಕೊಂಡಿರುತ್ತಾರೆ. ಜಡೆ ಕೋಲಾಟಕ್ಕೆಂದೇ ನಿಗದಿಪಡಿಸಿಕೊಂಡ ನಿಕ್ಕರು, ಬನಿಯನ್ ಜೊತೆಗೆ ಮೊಣಕಾಲಿನವರೆಗಿನ ಕಚ್ಚೆಯ ವೇಷಭೂಷಣವಿರುತ್ತದೆ. ಕಾಲಿಗೆ ಗೆಜ್ಜೆ ಧರಿಸಿದ ಕಲಾವಿದರು ಪದಗಳಿಗೆ ದನಿಗೂಡಿಸುತ್ತಾ ಪರಸ್ಪರ ಕೋಲುಗಳನ್ನು ತಾಡಿಸುತ್ತ, ಒಬ್ಬರನ್ನೊಬ್ಬರು ಹಾವು ಚಲನೆಯ ವಕ್ರಗತಿಯಲ್ಲಿ ಅಡ್ಡಹಾಯತ್ತ ಲೆಕ್ಕ ತಪ್ಪದಂತೆ ಕುಣಿತದ ಹೆಜ್ಜೆ ಹರಿಸಿ ಇಳಿಬಿದ್ದ ಕೈಯಲ್ಲಿನ ಹಗ್ಗಗಳು ಜಡೆ ಹೆಣೆದುಕೊಳ್ಳುವಂತೆ ಮಾಡುತ್ತಾರೆ. ಪೂರ್ತಿಜಡೆ ಹೆಣೆದಾದ ನಂತರ ಜಡೆ ಬಿಡಿಸುವಾಗಲೂ ಮತ್ತದೇ ಹೆಜ್ಜೆಯ ಲೆಕ್ಕಾಚಾರವನ್ನೇ ತಿರುಗಾಮುರುಗಾ ಅನುಸರಿಸುತ್ತಾರೆ. ಸಾಮಾನ್ಯವಾಗಿ ಜಡೆ ಹೆಣೆಯುವಾಗ ಒಂದು ಹಾಡು, ಜಡೆ ಬಿಡಿಸುವಾಗ ಮತ್ತೊಂದು ಹಾಡು ಇರುತ್ತದೆ. ಹೆಜ್ಜೆಗತಿಯ ಲೆಕ್ಕವನ್ನು ಯಾರೊಬ್ಬರು ತಪ್ಪಿಸಿದರೂ ಹಗ್ಗಗಳು ಸಿಕ್ಕಾಗಿ ಸಮರ್ಪಕ ಜಡೆಹೆಣಿಗೆ ಸಾಧ್ಯವಾಗುವುದಿಲ್ಲ. ಪಟಗಾಣೆ, ಬಾರುಕೋಲು ಗಂಟು, ಸರಪಣಿ, ನೆಲವು ಮತ್ತು ಜೋಡಿ ಜಡೆಯಂತಹ ವಿವಿಧ ಜಡೆ ಹೆಣಿಗೆಗಳಿವೆ. ಉತ್ತರ ಕನ್ನಡದಲ್ಲಿ ಹಗ್ಗಗಳಿಗೆ ಬದಲಾಗಿ ಬಣ್ಣ ಬಣ್ಣದ ಸೀರೆ, ವಸ್ತ್ರಗಳನ್ನು ಬಳಸಿ ಮಹಿಳೆಯರು ಇದೇ ವರಸೆಯ ಕೋಲಾಟವನ್ನಾಡುತ್ತಾರಾದರೂ ಅದನ್ನು ಗೋಪು ಕುಣಿತ ಎನ್ನುತ್ತಾರೆ. ದೊಣ್ಣೆ ವರಸೆಯಂತೆಯೇ ಮೂಲದಲ್ಲಿ ಕೋಲಾಟವೂ ಒಂದು ಸಮರಕಲೆಯೇ ಆಗಿದೆ. ಅದರ ಕಲಾತ್ಮಕ ವಿಸ್ತೃತ ಮತ್ತು ಮುಂದುವರಿದ ರೂಪಗಳಲ್ಲಿ ಒಂದು ಈ ಜಡೆ ಕೋಲಾಟ.

 

  ಗಮನಿಸಿ: ಜಡೆಕೋಲಾಟವು ಬರೀ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಭಾರತದ ಅನೇಕ ರಾಜ್ಯಗಳಲ್ಲೂ ಬೇರೆ ಬೇರೆ ರೂಪಗಳಲ್ಲಿದೆ. ಆಸಕ್ತರ ಅನುಕೂಲಕ್ಕಾಗಿ ಒಂದೆರಡು ಹಳೆಯ ಛಾಯಾ ಚಿತ್ರಗಳನ್ನೂ ಇಲ್ಲಿ ನೀಡಿದ್ದೇವೆ.

 

ಇತ್ತೀಚಿನ ನವೀಕರಣ​ : 13-06-2023 02:56 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080